Thursday, September 10, 2009

ನಿಜ..ನಿಜ..ನಿಜ..

****ಎಲ್ಲೋ ಕೇಳಿದ ಮಾತು. ನಿಜಕ್ಕೆ ಮೂರು ಮುಖಗಳಂತೆ. ಮೊದಲನೆಯದು ನಾನು ಕಾಣುವ ಮುಖ. ಎರಡನೆಯದು ಉಳಿದವರೆಲ್ಲ ಕಾಣುವ ಮುಖ. ಸಧ್ಯಕ್ಕೆ ಈ ಎರಡು ಮುಖಗಳು ಸಾಕು;ಮೂರನೆಯ ಮುಖ ಆ ಮೇಲೆ ನೋಡೋಣ. ಯಾವುದೇ ಘಟನೆ ಆರಿಸಿಕೊಳ್ಳಿ. ಏನು ನಡೆದಿದೆ ಎಂಬುದರ ಬಗ್ಗೆ ನಿಮ್ಮ ಯೋಚನೆ ಖಚಿತಪಡಿಸಿಕೊಳ್ಳಿ. ಅದೇ ಘಟನೆಯ ಬಗ್ಗೆ ಬೇರೆ ಯಾರದಾದರೂ ಅಭಿಪ್ರಾಯ ಕೇಳಿ. ಒಂದು ಸಣ್ಣ ವ್ಯತ್ಯಾಸವಾದರೂ ಇರುತ್ತದೆ. ಅದು ಹಾಗಲ್ಲ ಮಾರಾಯಾ...ಎಂದು ನೀವು ನಿಜವನ್ನು ಅವನಿಗೆ ತಿಳಿಸಲು ಹೊರಡುತ್ತೀರಿ. ನೀವು ಹೇಳುವುದನ್ನು-ತಾಳ್ಮೆಯಿದ್ದರೆ-ಅವನು ಕೇಳಿ, ಅದು ಹಾಗಲ್ಲ ಮಾರಾಯಾ..ಎಂದು ತನ್ನ ನಿಜವನ್ನು ಸ್ಥಾಪಿಸಲು ಪ್ರಯತ್ನಿಸುತ್ತಾನೆ.
****ಉದಾಹರಣೆಗೆ ದೇವರ ಬಗೆಗಿನ ಚರ್ಚೆಯನ್ನೇ ಗಮನಿಸಿ.[ದೇವರನ್ನು ನಾನು ಆರಿಸಿದ ಕಾರಣ ದೇವರು ನನ್ನ ಬಳಿ ಬಂದು ನಿಮ್ಮ ತಕರಾರಿನ ಮಧ್ಯೆ ನನ್ನ ತೂರಿಸಿದ್ದು ಯಾಕೆ ಎಂದು ಕೇಳುವುದಿಲ್ಲ. ಅಕಸ್ಮಾತ್ತಾಗಿ ಹಾಗೆ ಬಂದರೆ ಅನಾಯಾಸವಾಗಿ ದೇವರನ್ನು ಕಂಡಂತಾಯಿತಲ್ಲ!] ಜಗತ್ತಿಗೆಲ್ಲ ದೇವರು ಒಬ್ಬನೇ ಎಂದು ಎಲ್ಲ ಧರ್ಮಗಳೂ ಘೋಷಿಸುತ್ತವೆ. ನಿಜ. ಆದರೆ ಈ ದೇವರು ಯಾರು? ಶೈವರಿಗೆ ಶಿವ, ವೈಷ್ಣವರಿಗೆ ವಿಷ್ಣು, ಕ್ರಿಶ್ಚಿಯನ್ನರಿಗೆ ಕ್ರಿಸ್ತ/ಶಿಲುಬೆ.ನಮ್ಮ ನಿಮ್ಮಂತವರಿಗೆ ಮನೆಯ ಮೂಲೆಯಲ್ಲಿರುವ ತಲೆತಲಾಂತರದಿಂದ ಪೂಜಿಸುತ್ತ ಬಂದಿರುವ ಒಂದಿಷ್ಟು ಮೂರ್ತಿಗಳು. ದೇವರು ಒಂದೇ ಎಂದು ಹೇಳುತ್ತಲೇ ಅವರವರ ದೇವರ ನಿಜದ ಬಗ್ಗೆ ಚರ್ಚೆ, ಯುದ್ಧ, ಹಿಂಸೆ ನಡೆಯುತ್ತೆ. ಹೌದಾ ಅಲ್ಲವಾ ನೀವೇ ಹೇಳಿ.
****ಮತ್ತೆ ನಿಜದ ಮೂರನೆಯ ಮುಖ : ನಾನು ನೋಡಿರದ, ನೀವೂ ನೋಡಿರದ, ಪ್ರಾಯಶಃ ನೋಡಲು ಹಂಬಲಿಸದ ನಿಜವಾದ "ನಿಜ"

5 comments:

Gowtham said...

hagadare nijakke mooru mukhagalalli ondu nijavada nija, inneredu sullina nija. A nijavada nijakku enadru 3 mukhagaliveyo?

Unknown said...

nija nijada nija

Adarsha said...

idu ondu taraha "Theory of Relativity" udaharane annisudillva?

pratiyondu mukhakku, aya mukhakke sambandisida "space time" nalli nija, nijavada nija agirutte ansatte.

ಮೂರ್ತಿ ಹೊಸಬಾಳೆ. said...

ನಿಮ್ಮ ಹೊಸ ಪೊಸ್ಟ್ ಒಂದು "ಅನೀತಿ ಕಥೆ" ಓಪನ್ ಆಗ್ತಾ ಇಲ್ಲೆ!!
Sorry, the page you were looking for in the blog ಹೊಸ ಮನೆ does not exist.

ಹೇಳಿ ಬತ್ತಾ ಇದ್ದು ಚೆಕ್ ಮಾಡ್ತ್ರಾ ಪ್ಲೀಸ್?

ಮೃತ್ಯುಂಜಯ ಹೊಸಮನೆ said...

ಅದ್ಯಾಕೆ ಬರ್ತಾ ಇಲ್ಲೆ ಅಂತ ನಂಗೂ ಗೊತ್ತಾಗ್ತ ಇಲ್ಲೆ. ಕಂಪ್ಯೂಟರ್ ಬಗ್ಗೆ ಎಂಗ್ ಗೊತ್ತಿಪ್ದು ಚೂರೇ ಚೂರು. ಇನ್ನೂ ಎಲ್ ಕೆ ಜಿ ಲಿದ್ದಿ. ಏನೇನೋ ಸಾಹಸ ಮಾಡ್ತಾ ಇದ್ದಿ. ಏನಾರೂ ಅಗ್ತಿಕ್ಕು. ಅಲ್ಲೀವರೆಗೆ...