೧
ಮಂತ್ರಿಪತ್ನಿಯ ಕೊರಳಲ್ಲಿ ಪರಿಪರಿಯ ಹಾರ - ಬರದ ಪರಿಹಾರ .
ರೈತರೊಡಲಲ್ಲಿ ಹಾ .. ಹಾ...ಖಾರ !--ಬರದ ಪರಿಹಾರ !
೨.
ಕುಡಿದು ನಶೆಯೇರಿ ಗಂಡ ತೂರಾಡುತ ಮನೆಗೆ ಬರಲು
ಸಿಟ್ಟಲಿ ಹೆಂಡತಿ ಕೈಯಲಿ ಹಿಡಿದಳು ಹಳೆಯದೊಂದು ಬರಲು !
Monday, October 20, 2008
Wednesday, September 24, 2008
ಲೂಸ್ಪದ್ಯ ೨ --೩
೧
ಹುಡುಗ ಹೇಳಿದನು ಮಾತಲ್ಲಿ ಮಧು ತುಂಬಿ
ಹುಡುಗೀ ನಾ ನಿನ್ನ ನಲ್ಲ!.. ನಲ್ಲ!!
ಹುಡುಗಿ ಹೇಳಿದಳು ಕಣ್ಣಂಚಲ್ಲಿ ನಗೆ ಚೆಲ್ಲಿ
ಹುಡುಗಾ ನೀ ನನ್ನ ನಲ್ಲನಲ್ಲ !!
೨
ಭಟ್ಟರ ಮಂತ್ರವು ಕೇಳಿತು ಮೈಕಲಿ ಚೌತಿಯ ದಿನದಂದು.
ಗಣೇಶಾಏನ್ಮಹಾ..ವಿನಾಯಕಾಏನ್ಮಹಾ..ಗಜಾನನಾಏನ್ಮಹಾ
ಕೇಳಿದ ಗಣಪನು ಮೌನದಿ ಕೂತನು ಅರ್ಥವು ಇದಕೇನೆಂದು.!

Tuesday, September 23, 2008
Thursday, September 11, 2008
ಮಾತು ಮುತ್ತು.
೧
ಆನೆಗೆ ನಡೆದದ್ದೇ ದಾರಿ . ಇರುವೆಗೂ ಕೂಡ..
೨
ಪಾಪ ಕಳೆವಾತುರದಿ ಭಕ್ತ ಜನ ಗುಡಿಯಲ್ಲಿ ! ಲಕ್ಷ್ಮಿ ಕುಣಿಯುತ್ತಾಳೆ ಅರ್ಚಕರ ಮನೆಯಲ್ಲಿ !
೩
ರಾತ್ರಿ ಕಳೆಯಿತು. ಚಂದ್ರ ತೆರಳಿದ. ವಿರಹ ನಿಶೆಗೆ .
ಉಮ್ಮಳದ ಅವಳ ಕಂಬನಿ.
ಇಬ್ಬನಿ !
೪
ಸೂರ್ಯ ಮುಳುಗಿದ.
ಸಿಟ್ಟಲ್ಲಿ ಸಂಧ್ಯೆ ಎಸೆದಳು ಮಲ್ಲಿಗೆಯ ಮಾಲೆ !
ನಭದ ತುಂಬೆಲ್ಲ ಮಿನುಗು ತಾರೆ !
೫
ಕೊರಡೊಣಗಿದರೆ ಕಿಡಿಯೊಂದೇ ಸಾಕದರ
ದಹಿಸಲಿಕೆ !
ಹಸಿ ಕಾಷ್ಠ . ಅಗ್ನಿಯೂ ಭಗ್ನ. ಮಾಯವಾಗುವನು
ಧೂಮದೊಳಗೆ !

Subscribe to:
Posts (Atom)