Tuesday, June 30, 2009

ನಾಲ್ಕು ಸುದ್ದಿಗಳು.

*****ಸುದ್ದಿ ಒಂದು: ಜಾರ್ಖಂಡ್ ನ ಪಲಾಮೌ ಜಿಲ್ಲೆಯ ಚತ್ರಾಪುರ ಬ್ಲಾಕ್ ನ ಸಾವಿರಕ್ಕೂ ಹೆಚ್ಚು ರೈತರು ಸತತ ನಾಲ್ಕು ವರ್ಷಗಳ ಬರಗಾಲದಿಂದ ತತ್ತರಿಸಿ ಆತ್ಮಹತ್ಯೆ ಮಾಡಿಕೊಳ್ಳಲು ರಾಷ್ರಪತಿಗಳ ಅನುಮತಿ ಕೋರಿದ್ದಾರೆ.
*****ಸುದ್ದಿ ಎರಡು: ನಮ್ಮ ಸಂಸತ್ ಭವನ, ಪ್ರಧಾನಿ ನಿವಾಸ ಮತ್ತು ರಾಷ್ರಪತಿಗಳ ನಿವಾಸದ ಒಟ್ಟು ವಿದ್ಯುತ್ ಖರ್ಚು ವರ್ಷಕ್ಕೆ ಸುಮಾರು ೧೪ ಕೋಟಿ ರೂಪಾಯಿಗಳು.
*****ಸುದ್ದಿ ಮೂರು: ಗುಜರಾತಿನ ಮುಖ್ಯಮಂತ್ರಿ ಮೋದಿಯವರ ಪ್ರತಿತಿಂಗಳ ವಿಮಾನಯಾನದ ಖರ್ಚು ಸುಮಾರು ೨೭ ಲಕ್ಷ ರೂಪಾಯಿಗಳು.
*****ಸುದ್ದಿ ನಾಲ್ಕು: ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ತಮ್ಮ ಹಾಗೂ ತಮ್ಮ ಪಕ್ಷದ ಸಂಸ್ಥಾಪಕ ಕಾನ್ಶೀರಾಮ್ ಅವರ ಪ್ರತಿಮೆಗಳನ್ನು ಉತ್ತರ ಪ್ರದೇಶದ ಎಲ್ಲಡೆ ಸ್ಥಾಪಿಸಲು ನಿರ್ಧರಿಸಿ, ಇದಕ್ಕಾಗಿ ಸರಕಾರೀ ಬಾಬತ್ತಿನಲ್ಲಿ ಎರಡು ಸಾವಿರ ಕೋಟಿ ಹಣ ಮೀಸಲಿಟ್ಟಿದ್ದಾರೆ.
*****ಇವನ್ನು ಓದಿದೆ.ಯಾವ ರೀತಿಯ ಪ್ರತಿಕ್ರಿಯೆ ತೋರಿಸಬೇಕು ತಿಳೀತಿಲ್ಲ.

4 comments:

Unknown said...

hmm
Balasya prithvi

ಮನಸ್ವಿ said...

ಹ್ಮ್.. ಮುಂದೇನಾಯಿತು?... ಪ್ರಪಂಚದಲ್ಲಿ ಹೋಗಲಿ ನಮ್ಮ ದೇಶದಲ್ಲಿ ಏನೇನು ನೆಡೆಯುತ್ತಿದೆ ಎಂದು ತಿಳಿಯುತ್ತಲೇ ಇಲ್ಲ! ನಮ್ಮೂರಲ್ಲಿ ಈಸ್ವರಪ್ಪೋರು ಕಮೆಂಟಲೂ ಕರೆಂಟು ಕೊಡುತ್ತಿಲ್ಲ.. ಇನ್ನೆಲ್ಲಿ ಸುದ್ದಿ ತಿಳಿದುಕೊಳ್ಳೋದು! ಇವತ್ತೊಂದು ಸ್ವಲ್ಪ ಕರೆಂಟು ರೇಶನ್ ಲೆಖ್ಖದಲ್ಲಿ ಇದೆ ಮಾರಾಯ...

ರಮೇಶ್ ಹಿರೇಜಂಬೂರು said...

ಜನ ಪ್ರತಿನಿದಿಗಳು ಬಡವರ ಹಣವನ್ನು ಹೀಗೆ ಒಂದೆಡೆ ಪೋಲು ಮಾಡುವುದರ ಜತೆಗೆ ಬಡ ಜನರನ್ನು ನಿರ್ಲಕ್ಷಿಸಿರುವುದೇ.. ಇಂದು ಅನೇಕ ಅವಾಂತರಗಳಿಗೆ ಕಾರಣವಾಗಿದೆ... ಜನಪ್ರತಿನಿದಿಗಲ್ಲು ಮಾಡುವ ಖರ್ಚಿಗೆ ಲೆಕ್ಕವೇ ಇಲ್ಲ ನೀವು ಕೊಟ್ಟಿರುವುದು ಕೆವಲ್ಸ್ ಶಾಂಪಲ ಮಾತ್ರ... ಇಂಥ ನೊರೆಂಟು ನಿದರ್ಶನಗಳು ನಮ್ಮಲ್ಲೇ ಇವೆ. ಕೆಲ ದಿನಗಳ ಹಿಂದಷ್ಟೇ ಕರ್ನಾಟಕದಲ್ಲಿ ನಡೆದ ಹಗರಣಗಳನ್ನು ಸದನದಲ್ಲಿ ಎತ್ತಿದ ನಾಯಕರಿಗೆ ಉತ್ತರ ಸಿಕ್ಕಿದೆಯೇ...? ಎಲ್ಲರು ಒಂದು ರೀತಿ ಹೆಗ್ಗಣಗಳಾಗಿದ್ದಾರೆ. ಜನರು ಮಾತ್ರ ಅಮಾಯಕರು. ಒಂದು ರೀತಿ ಇಡಿ ವ್ಯವಸ್ಥೆ ಗೆದ್ದಕು ಕಾತ್ತಿದ ಹುತ್ತಕ್ಕೆ ಹಾಗು ಹೊಕ್ಕ ಹಾಗಾಗಿದೆ..

ShruBhanu said...

ನೀ ಇದನ್ನ ಓದಿದ ಮೇಲೆ ಏನು ಹೇಳದು ಬೇಡ ಕಾಣ್ತೆನ . . .ಈಗ ಸ್ವಲ್ಪ ದಿನದ ಮುಂಚೆ ಸಹಕಾರಿ ಕಛೇರಿಗಳಲ್ಲಿ ಸಹಿ ಯಾವ ಬಣ್ಣದ ಶಾಹಿಯಲ್ಲಿ ಹಾಕಕ್ಕು ಅಂತ ಗಲಾಟೆ ಅತಡ!!
೩ ತಿಂಗಳ ಪ್ರೋಗ್ರೆಸ್ಸ್ ರಿಪೋರ್ಟ್ ತೋರ್ಸಿದ್ದನ್ನ ಊದದಕ್ಕೆ ೬ ತಿಂಗ್ಳು ತಡಿರಿ ಅಂತ ಒಬ್ರು ಅಧಿಕಾರಿಗೆ ಸುಮ್ನೆ ಕೂರ್ಸಿದ್ವಡ ಕತೆ ಹಿಂಗಾದ ಮೇಲೆ ಪೇಪರ್ ಓದದೆ ಬೇಡ ಅನ್ನಿಸ್ತು . . ???