Wednesday, September 30, 2009

ಒಂದು ಅನೀತಿ ಕತೆ.

ಪ್ರತಿನಿತ್ಯ ಸಾಯಂಕಾಲ,ಸೂರ್ಯ ಮುಳುಗುವುದು ತಪ್ಪಿದರೂ ತಪ್ಪಬಹುದು, ಆದರೆ ಆ ಹತ್ತು ಜನ ಊರ ಹೊರಗಿನ ಗಾಳಿ ಮರದ ಕೆಳಗಡೆ ಸೇರುವುದು ತಪ್ಪುವುದಿಲ್ಲ. ಅಲ್ಲಿ ಕೂತು ಇಡೀ ಪ್ರಪಂಚ ಸುತ್ತಾಡುತ್ತಾರೆ. ಹತ್ತು ಜನರೂ ಏಕಕಾಲಕ್ಕೆ ಹತ್ತು ವಿಷಯಗಳನ್ನು ಕುರಿತು ಮಾತಾಡುತ್ತಿರುತ್ತಾರೆ. ಯಾರಿಗೂ ತಮ್ಮ ಮಾತುಗಳನ್ನು ಬೇರೆಯವರು ಕೇಳಲೇಬೇಕು ಎಂಬ ಜರೂರತ್ತಿಲ್ಲ. ಒಂಬತ್ತು ಗಂಟೆ ಆಯಿತೆಂದರೆ ಎಲ್ಲ ಬಡ ಬಡ ಎದ್ದು ಹೊರಡುತ್ತಾರೆ.ಅವರವರ ತಾಪತ್ರಯಗಳು ಮತ್ತೆ ಬೆನ್ನೇರುತ್ತವೆ.
ಆ ದಿನವೂ ಹೀಗೇ ಸೇರಿದವರು ಮಾತಾಡುತ್ತಿದ್ದರು. ಇದ್ದಕ್ಕಿದ್ದಂತೆ ಒಬ್ಬ ಅಂದ.”ಅಲ್ಲ..ನಾವು ಯಾರಿಗೂ ಏನೂ ಕೆಟ್ಟದು ಮಾಡಿಲ್ಲ. ನಮ್ ಪಾಡಿಗೆ ನಾವಿದೀವಿ. ಅದ್ರೂ ನಮ್ಮನ್ನ ಪೋಲಿಹುಡುಗ್ರು ಅಂತಾರಲ್ಲ..” ಸಮಾಜದ ಬಗ್ಗೆಯೋ,ಪ್ರಪಂಚದ ಯಾವುದೋ ಸಮಸ್ಯೆಯ ಬಗ್ಗೆಯೋ ಆಗಿದ್ದರೆ ಉಳಿದ ಯಾರಿಗೂ ಇವನ ಮಾತು ಕೇಳುತ್ತಲೇ ಇರಲಿಲ್ಲವೇನೋ! ಅದ್ರೆ ಪೋಲಿಹುಡುಗ್ರು..ಬಹುವಚನ ಪ್ರಯೋಗ..”ಯಾರಯ್ಯ ಹಾಗಂದೋರು?” “ಒದೀಬೇಕು ಹಾಗಂದೋರಿಗೆ” “ಅರೆ! ಒದ್ರೆ ಪೋಲಿ ಹುಡುಗ್ರು ಅಂತ ನಾವೇ ಸಾಕ್ಷಿ ಕೊಟ್ಠಾಗೆ ಆಗಲ್ಲ್ವೇನೋ?” “ಒದಿಯೋದು ಅಂದ್ರೆ ಒದಿಯೋದು ಅಲ್ಲಪ್ಪಾ…” ಏನೋ ವಿವರಣೆ ನೀಡತೊಡಗಿದ. ಇಷ್ಟು ದಿನಗಳಲ್ಲಿ ಎಂದೂ ಕಾಣದಿದ್ದ ಏಕತೆ ಇಂದು ಕಂಡಿತು. “ಅವ್ರು ಹೇಳೋದೆ ಸತ್ಯ ಇರ್ಬಹುದು. ನಾವು ಒಳ್ಳೇರು ಅನ್ನೋದಕ್ಕೆ ಏನ್ರಯ್ಯ ಸಾಕ್ಷಿ ಇದೆ?” ಯಾರೋ ಒಬ್ಬ ಗಂಭೀರವಾದ ಸಂದೇಹ ಎತ್ತಿದ. “ಆದ್ರೆ ನಾವು ಕೆಟ್ಟೋರು ಅನ್ನೊದಕ್ಕೆ ಏನಿದೆ ಸಾಕ್ಷಿ?” ಇನ್ಯಾರದೋ ತಕರಾರು. ಎಲ್ಲರೂ ತಾವು ಒಳ್ಳೆಯವರೋ ಕೆಟ್ಟವರೋ ಎಂಬುದನ್ನು ಚಿಂತಿಸುತ್ತಾ ಮೌನವಾದರು.ಅವರಿಗೂ ನಿಜವಾಗಿ ಗೊತ್ತಾಗಲಿಲ್ಲ. ಯಾರನ್ನಾದರೂ ಕೇಳುವ ಅಂದರೆ, ಅವರು ನೀವು ಒಳ್ಳೇರಲ್ಲ ಕಣ್ರೋ ಎಂದರೆ?
ಅವರಲ್ಲೇ ಹಿರಿಯವನಾದವನು ಹೇಳಿದ. “ಒಂದ್ಕೆಲ್ಸ ಮಾಡುವಾ. ನಾವೀಗ ಹತ್ ಜನ ಇದೀವಿ. ನಮ್ ಗುಂಪಲ್ಲೇ ನಮ್ ನಮ್ಗೆ ಯಾರು ಒಳ್ಳೇರು ಯಾರು ಒಳ್ಳೇರಲ್ಲ ಅನ್ಸುತ್ತೆ ಅಂತ ಪರೀಕ್ಷೆ ಮಾಡೋಣ. ಒಂದ್ ಚೀಟೀಲಿ ಎಲ್ರೂ ಅವ್ರಿಗೆ ಈ ಗುಂಪಲ್ಲಿ ಯಾರು ಒಳ್ಳೇರು ಯಾರು ಒಳ್ಳೇರಲ್ಲ ಅನ್ನೊದನ್ನು ಬರೀಬೇಕು. ಗುಂಪಲ್ಲಿ ಅವ್ನೂ ಸೇರೋದ್ರಿಂದ ಅವ್ನಿಗೆ ಅವ್ನು ತಾನು ಒಳ್ಳೇನೋ ಒಳ್ಳೇನಲ್ವಾ ಅನ್ನೋದನ್ನೂ ಬರೀಬೇಕು.ಆಯ್ತಾ?” ಎಲ್ಲರೂ ಜೈ ಎಂದು ಒಂದೊಂದು ದಿಕ್ಕಿಗೆ ಮುಖ ಮಾಡಿ ಪಟ್ಟಿ ಮಾಡತೊಡಗಿದರು.
ಒಬ್ಬ ಯೋಚಿಸಿದ: “ತಾನು ನಿಜವಾಗಿ ಅಷ್ಟು ಒಳ್ಳೇನಲ್ಲ. ಕೆಲವು ಕೆಟ್ಟ ಗುಣಗಳು ತನ್ನಲ್ಲಿವೆ. ಸರಿ..ಹಾಗಂತ ನನ್ನ ನಾನೇ ಕೆಟ್ಟವ ಅಂತ ಬರೆದ್ರೆ ಸರಿಯಾಗಲ್ಲ. ಆದ್ರಿಂದ ತಾನು ಒಳ್ಳೇನಂತಲೇ ಬರೀಬೇಕು. ಉಳಿದೋರಲ್ಲಿ ಕೆಟ್ ಗುಣಾನೂ ಇದೆ,ಒಳ್ಳೇ ಗುಣಾನೂ ಇದೆ. ಅದ್ರೆ ಅವ್ರನ್ನ ಒಳ್ಳೇರು ಅಂತ ನಾನು ಬರೆದ್ರೆ, ಅವ್ರು ನನ್ನ ಒಳ್ಳೇನು ಅಂತ ಬರೀದಿದ್ರೆ ನಂಗೆ ನನ್ ಓಟು ಮಾತ್ರ.ಒಟ್ಟಲ್ಲಿ ನಾನು ಕೆಟ್ಟೋನು ಅಂತ ಆಗ್ತೀನಲ್ಲ. ಆದ್ರಿಂದ ಅವ್ರೆಲ್ಲ ಕೆಟ್ಟೋರು ಅಂತ ಬರೀತೀನಿ” ಹಾಗೇ ಬರೆದ.
ಎಲ್ಲರೂ ಹಾಗೇ ಯೋಚ್ನೆ ಮಾಡಿದ್ರು.
ಗುಂಪಿಗೆ ಬಂದ ನೂರು ಓಟಲ್ಲಿ ಹತ್ರಲ್ಲಿ ಮಾತ್ರ ಒಳ್ಳೇರು ಅಂತ, ಉಳಿದ ತೊಂಬತ್ರಲ್ಲಿ ಕೆಟ್ಟೋರು ಅಂತ ಇತ್ತು.
ಎಲ್ರೂ ಬೆಪ್ಪಾಗಿ ಕೂತ್ರು.
(ಈ ಕತೆ ನೀತಿ ಏನು ಅಂತ ನಂಗೊತ್ತಿಲ್ಲ. ಆದ್ರೆ ಗುಂಪಲ್ಲಿ ಸುಮ್ನೆ ನಿಂತು ಮಾತು ಆಲ್ಸಿ. ಏನ್ ನೀತಿ ಅಂತ ನಿಮ್ಗಾದ್ರೂ ಹೊಳೀಬಹುದು.)

6 comments:

Gowtham said...

namma samajakke kannadi hiditantide. nanu matra ollevnu, nanu madiddu matra sari anta helodu. Neeti enappa andre berevra olle guna gurtisodu kalibeku, illandre samaja nam olle guna gurtisolla anta agbahudeno!

ಮೃತ್ಯುಂಜಯ ಹೊಸಮನೆ said...

lekhanada aashayavannu sariyaagi gurutisiddakke vandanegalu.

ಗೌತಮ್ ಹೆಗಡೆ said...

idu hesare illada ondu chendada neeti kathe. katheya bhaava edege naatide.ashtu saaku. matte katheya neeti huduki hesaru kododu yaake alwa?:)olleya baraha sir.

ಮೃತ್ಯುಂಜಯ ಹೊಸಮನೆ said...

to Gowtam Hegde

nanna blaagige modala baari bandiddiri. svaagata haagu pratikruyege dhanyavaadagaLu. nimma kavanagaLannu Odide. nanna pratikriye tusu nadhaana. bEsarisabEDi. baruttiri.

ಗೌತಮ್ ಹೆಗಡೆ said...

paravaagilla sir:):) matte nanna blog ge baruttiri.;)

ShruBhanu said...

ನಿಜ. ನಿಮ್ಮ ಲೇಖನವನ್ನು ಓದಿ ಮನಸ್ಸು ಯೋಚನೆಗೆ ಬಿದ್ದದ್ದು ಹೌದು. ಸಣ್ಣವಳಿದ್ದಾಗ ನಡೆದ ಘಟನೆ ಇದು.
ಶಾಲೇಲಿ ಒಂದಿನ ಎಲ್ಲರೂ ಗಲಾಟೆ ಮಾಡ್ತಾ ಇದ್ದಿದ್ಯಾ. ಮಾಷ್ಟು ಬಂದು ಯಾರು ಅಷ್ಟೆಲ್ಲಾ ಶಬ್ದ ಮಾಡ್ತಿರದು ಅಂದಾಗ ಎಲ್ಲರೂ ಬೇರೆಯವ್ರ ಕಡೆ ಗೆ ಕೈ ತೋರ್ಸಿದ್ದಿದ್ದ ಆಗ ಮಾಷ್ಟ್ರು ಹೇಳಿದಿದ್ದ. . ೧ ಬೆರಳು ಮಾತ್ರ ಬೇರೆಯವ್ರ ಕಡೆಗಿರ್ತು ಉಳಿದೆಲ್ಲ ಬೆರಳು ನಮ್ಮ ಕಡೆಗೆ ತೋರಿಸ್ತಿರ್ತು. .ಹಂಗಾಗಿ ಬೇರೆಯವ್ರ ಕಡೆ ಕೈ ತೋರ್ಸ ಮೊದ್ಲು ನಮ್ಮ ಕಡೆ ನಂಗೆ ಗಮನ ಇರ್ಲೆ ಬೇಕು ಅಂತ...