Wednesday, October 20, 2010

ಮತ್ತೆ ಅಕ್ಷೌಹಿಣಿ..

 ಮಹಾಭಾರತದ ಯುದ್ಧದಲ್ಲಿ ಉತ್ತರ ಭಾರತದ ಎಲ್ಲ ರಾಜರ ಸೈನ್ಯವೂ ಸೇರಿ ೧೮ ಅಕ್ಷೌಹಿಣಿ ಆಗಿತ್ತು.(ನನ್ನ ಹಿಂದಿನ ಲೇಖನದಲ್ಲಿ ಅಕ್ಷೋಹಿಣಿ ಎಂದು ತಪ್ಪಾಗಿ ಬರೆದಿದ್ದೆ. ಅದು ಅಕ್ಷೌಹಿಣಿ ಎಂದಾಗಬೇಕು.ತಪ್ಪಿಗೆ ಕ್ಷಮೆ ಕೋರುತ್ತೇನೆ.) ಒಂದು ಅಕ್ಷೌಹಿಣಿ ಅಂದರೆ ಲೆಕ್ಕ ಗೊತ್ತಾಯಿತು.ಸರಿ.ಆದರೆ ಎಷ್ಟೊ ಪುಟುಗೋಸಿ ರಾಜರ ಬಳಿ ಅಕ್ಷೌಹಿಣಿ ಸೈನ್ಯ ಇರದಿದ್ದರೆ ಹ್ಯಾಗೆ ಎಣಿಕೆ ಎಂಬ ಅನುಮಾನ ಬಂತು. ಈ ಅನುಮಾನಗಳೇ ಹಾಗೆ.ಹನುಮಂತನ ಬಾಲದ ತರಹ.ಬಟ್ಟೆ ತೋರಿದಷ್ಟೂ ಬೆಳೆಯುತ್ತದೆ! ಅದಕ್ಕೂ ಉತ್ತರ ಸಿಕ್ಕಿತು!
ಕುತೂಹಲವಿದ್ದರೆ ಮುಂದೆ ಓದಿ.
೧ ರಥ + ೧ ಆನೆ + ೩ ಕುದುರೆ + ೫ ಕಾಲಾಳು = ೧ ಪತ್ತಿ
೩ ಪತ್ತಿ = ೧ ಸೇನಾಮುಖ.
೩ ಸೇನಾಮುಖ = ೧ ಗುಲ್ಮ
೩ ಗುಲ್ಮ = ೧ ಗಣ
೩ ಗಣ =೧ ವಾಹಿನಿ
೩ ವಾಹಿನಿ =೧ ಪೃತನಾ
೩ ಪೃತನಾ = ೧ ಚಮೂ
೩ ಚಮೂ = ೧ ಅನೀಕಿನಿ
 ೧೦ ಅನೀಕಿನಿ = ೧ ಅಕ್ಷೌಹಿಣಿ.
ಸರಿ. ಆದರೆ ಈಗ ಮತ್ತೊಂದು ಅನುಮಾನ ಶುರುವಾಗಿದೆ. ಒಂದು ವೇಳೆ ಒಬ್ಬ ಚಿಲ್ರೆ ರಾಜನ ಸೈನ್ಯದಲ್ಲಿ ೫ ರಥ, ೮ ಆನೆ, ೧೫ ಕುದುರೆ ಮತ್ತು ೫೦೦ ಕಾಲಾಳುಗಳಿದ್ದರೆ ಅದನ್ನು ಏನೆಂದು ಕರಿಯೋದು?

4 comments:

sunaath said...

ಹೊಸಮನೆಯವರೆ,
ಇದುವರೆಗೂ ನಾನು ‘ಅಕ್ಷೋಹಿಣಿ’ ಎಂದೇ ಭಾವಿಸಿದ್ದೆ. ನಿಮ್ಮ ತಿದ್ದುಪಡಿಯ ನಂತರ ಸರಿಯಾದ ಪದ ತಿಳಿಯಿತು. ಧನ್ಯವಾದಗಳು.
ಇನ್ನು ನೀವು ಒಂದು ಒಗಟನ್ನು ಮುಂದೆ ಇಟ್ಟಿದ್ದೀರಿ. ಇಂತಹ ಅಸಮಬಲದ ಸೈನ್ಯದಿಂದ ಹೆಚ್ಚಿನ ಕಾಲಾಳುಗಳನ್ನು ತೆಗೆದು ಹಾಕುವದೇ ಸರಿಯಾದೀತೇನೊ ಎಂದು ಅನಿಸುತ್ತಿದೆ!

Mahesh said...

ಲೆಕ್ಕಕ್ಕಿಲದವರು .. ಬಹುಷಃ ಜನಸಂಖ್ಯ ಸ್ಫೋಟದಿಂದ ಆಗಲೂ ಜನ ತತ್ತರಿಸುತ್ತಿದ್ದರು ಎಂದು ಅನಿಸುತ್ತದೆ.

ShruBhanu said...

ee lekkha chennagiddu...
neevu heLidralli aa chilre raja 1 Sennmukha hoddidda anta matra kariyalakku...bereyadanna "Akshwhini" formation nalli serisalu baradille...allava?!
Bhanu

ಸೀತಾರಾಮ. ಕೆ. / SITARAM.K said...

Nice information.
Doubts are mother of invention...