೧. ಸಲಹೆಗಳಿರುವುದು ಬೇರೆಯವರಿಗೆ ಕೊಡಲೇ ಹೊರತು ಸ್ವಂತದ ಉಪಯೋಗಕ್ಕಲ್ಲ.
೨. ನೀವು ಕಡ ಕೇಳುವ ಹಿಂದಿನದಿನದವರೆಗೂ ನಿಮ್ಮ ಸ್ನೇಹಿತನ ಬಳಿ ಸಾಕಷ್ಟು ಹಣವಿರುತ್ತದೆ.
೩. ಮತ್ತೊಬ್ಬರ ಕಷ್ಟಕ್ಕೆ ನೆರವಾಗುವುದು ಮಾನವೀಯಧರ್ಮ ಎಂದು ಯಾರಾದರೂ ಹೇಳಿದರೆ, ಅವರು ಕಷ್ಟದಲ್ಲಿದ್ದಾರೆ ಎಂದರ್ಥ.
೪. ದೇವರಿಗೆ ಭಕ್ತ ಏನು ಕೊಟ್ಟರೂ ಸಾಕು;ಕೊಡದಿದ್ದರೂ ಅಡ್ಡಿಲ್ಲ.ಅರ್ಚಕರಿಗೆ ಮಾತ್ರ ಭಕ್ತರು ಕೊಡಲೇಬೇಕು. ಭಕ್ತರು ಕೊಡುವಷ್ಟೂ ಅವರಿಗೆ ಬೇಕು.
೫. ಅಪ್ರಾಮಾಣಿಕರಾಗುವ ಅವಕಾಶ ಸಿಗುವವರೆಗೂ ಎಲ್ಲರೂ ಪ್ರಾಮಾಣಿಕರೇ. ಹಾಗೆ ಅವಕಾಶವಿದ್ದಾಗಲೂ
ಪ್ರಾಮಾಣಿಕನಾಗಿದ್ದವನನ್ನು ಹಿಂದೆಲ್ಲ ಯೋಗ್ಯ, ಮಹಾನುಭಾವ ಇತ್ಯಾದಿ ಗುರುತಿಸುತ್ತಿದ್ದರು. ಈಗ ದಡ್ಡ, ವ್ಯಾವಹಾರಿಕ ತಿಳುವಳಿಕೆ ಇಲ್ಲದವನು ಎನ್ನುತ್ತಾರೆ.
೬. ಒಗ್ಗಟ್ಟಿಂದ ಕೆಲಸ ಮಾಡಿದರೆ ಎಲ್ಲರ ಕೆಲಸವೂ ಸುಲಭ ಎಂದು ಗುಂಪಿನಲ್ಲಿರುವ ಎಲ್ಲರಿಗೂ ಗೊತ್ತು. ಒಗ್ಗಟ್ಟಾಗಲು ಒಬ್ಬ ನಾಯಕ ಬೇಕು ಎಂಬುದರ ಬಗ್ಗೆಯೂ ಯಾರ ತಕರಾರೂ ಇಲ್ಲ. ತಕರಾರಿರುವುದು ನಾಯಕ ಯಾರಾಗಬೇಕು ಎಂಬುದರ ಬಗ್ಗೆ.