ಬೇರು ಊರದಿರೆ ಮಣ್ಣಲ್ಲಿ ಚಿಗುರೀತೆ ಕೊಂಬೆ
ಬಿಟ್ಟೀತೆ ಹೂವು,ಕಾಯಿ, ಹಣ್ಣು
ಹೀರದಿರೆ ಬೇರು ಮಣ್ಣನಿನೊಳಗಿನ ಸಾರ
ಆಗುವುದು ಗಿಡವು ಮಣ್ಣಲ್ಲಿ ಮಣ್ಣು.
ಕೆಲರು ನೋಡುವರು ಹೂವನ್ನ,ಕೆಲರು ಕಾಯನ್ನ
ಎಲ್ಲರಿಗೂ ಬೇಕು ಹಣ್ಣು
ಮಣ್ಣಿನೊಳಗಡೆ ಬಗೆದು ನೋಡುವವರಾರು
ಬೇಕದಕೆ ಸೂಕ್ಷ್ಮ ಕಣ್ಣು.
ಹೂವಾಗುವುದು ಸಹಜ,ಕಾಯಾಗುವುದು ಸಹಜ
ಮಾಗಿದರೆ ಸಹಜ ಹಣ್ಣು
ಬಂದು ಮುತ್ತುವುವು ಎಷ್ಟೆಲ್ಲ ಜೀವಗಳು
ಮರ ಬೋಳಾಗುವುದೂ ಸಹಜವೆನ್ನು
ಹೂವಾಗು ನೀ ಗೆಳೆಯ ಕಾಯಾಗು ಹಣ್ಣಾಗು
ನಡೆದಿರಲಿ ಜೀವದಾನ
ಮರೆಯದಿರು ಎಂದೆಂದೂ ಬೇರನ್ನ,ಮಣ್ಣನ್ನ
ಅದಕ್ಕೂ ಇರಲಿ ಸ್ಥಾನಮಾನ.
4 comments:
ಒಳ್ಳೆ ಅರ್ಥವತ್ತಾದ ಕವನ.. ಸೊಗಸಾಗಿದೆ..
ಸು೦ದರ ಕವನ...
ಜೀವನದಲ್ಲಿ ನೆನಪಿಟ್ಟುಕೊಳ್ಳಬೇಕಾದ೦ತಹ ತಿರುಳನ್ನು ಹೊ೦ದಿದೆ... ತು೦ಬಾ ಹಿಡಿಸಿತು.
ನಿಮ್ಮ ಕವನ ಚನ್ನಾಗಿದೆ ಮತ್ತು ಅರ್ಥಗರ್ಬಿತವಾಗಿದೆ, ಸರ್ ನಿಮ್ಮಿಂದ ನಾವು ತಿಳಿದುಕೊಳಬೇಕದದ್ದು ತುಂಬಾ ಇದೇ.
ಧನ್ಯವಾದಗಳು.ಹಾಗೇ ಕವನದ ಭಾವ,ಭಾಷೆ,ಲಯಗಳಲ್ಲಿ ಕುಂದು ಕಂಡರೆ ತಿಳಿಸಿ. ನನ್ನ ಕಲಿಕೆಗೆ ಅದು ಅಗತ್ಯ.
Post a Comment