ಮಾತಿನಾಟ
ನೀವು ಕೇಳುವಿರೆಂದು ಮಾತನಾಡಿದೆ ನಾನು
ಎಷ್ಟಿತ್ತು ಅವಕೆ ಅರ್ಥ?
ಇನ್ನು ಮಾತನಾಡುವುದಿಲ್ಲ. ಮಾತೇ ಆಡುತಿರಬೇಕು
ಆಡದಿರೆ ಬರಿಯ ಶಬ್ದಛತ್ರ!
ನಾನು ಆಡುವ ಮಾತು ನಿಮ್ಮಲ್ಲಿ ಮಿನುಗಿದರೆ
ಮಾತಿಗುಳಿದಂತೆ ರೇವು.
ದನಿ ಮರಳಿ ಮತ್ತೆ ನನ್ನನ್ನೇ ಸೇರಿದರೆ
ಅದು ನನ್ನ ಮಾತಿನ ಸಾವು!
ಹೊಳೆದ ಮಾತುಗಳೆಲ್ಲ ಹೊಳೆವ ಮಾತುಗಳಲ್ಲ
ಮಾತಾಗುತಿರಲಿ ರೇಕು!
ಹದ ಮೌನದಲ್ಲಿ ಹೂತ ಮಾತುಗಳೆಲ್ಲ
ಸಹಜ ಚಿಗುರಿದರೆ ಸಾಕು.
4 comments:
ಅಪರೂಪದ ಅತಿಥಿಗಳು ತುಂಬಾ ಚೆನ್ನಾಗಿದ್ದಾರೆ
ತುಂಬಾ ಚನಾಗಿದ್ದು...
reku andre yenthu...? revu andru gotagalle. :-)
ರೇಕು=(ನಾ)೧. ಚಿನ್ನ ಮುಂತಾದ ಲೋಹಗಳ ತೆಳುವಾದ ತಗಡು.೨.ಹೂವಿನ ಎಸಳು, ಪಕಳೆ.
ರೇವು=(ನಾ) ಬಂದರು.
Post a Comment