Friday, July 23, 2010

ಕಂಬಳಿ ಕೊಪ್ಪೆ

ಚಿಕ್ಕವನಿದ್ದಾಗ ಶಾಲೆ ಎಂದರೆ
ಬಳಪ,ಪೆನ್ಸಿಲ್ ತುಂಡು,ಸಂಪಿಗೆ ಹಣ್ಣು
ಸದಾ ತೆರೆದ ಕಣ್ಣು.

ಮಳೆಗಾಲದಲ್ಲಿ ನೀರ ಬುಗ್ಗೆ
ಅಂಗಿಚಡ್ಡಿ ಸದಾ ಒದ್ದೆ
[ಹುಡಿಗೀರ ಲಂಗವೂ]

ಆಗ ಕೊಡೆಗಾಗಿ ಹಠ
ಕೊಡೆ ಕೊಡೆ ಎಂದಪ್ಪನ ಮೇಲೆ ಸಿಟ್ಟು
ಕಳೆಯುತ್ತಿದ್ದೆ ನಾಲ್ಕು ದಿನ ಮಾತು ಬಿಟ್ಟು

ಕಡೆಗೆ ಅಪ್ಪ ಕರಿಕಂಬಳಿ ಕೊಪ್ಪೆ ಮಾಡಿ ಕೊಟ್ಟರು
ಹೊದ್ದರೆ ಬೆಚ್ಚಗಿನಪ್ಪುಗೆ.
ಅತ್ತಿತ್ತ ನೋಟವಿಲ್ಲ. ಎದುರು ಮಾತ್ರ ಕಾಂಬ ರಸ್ತೆ.
ನೇರ ಶಾಲೆಗೆ.

ಮಗಳಿಗೆ ಹೇಳಿದರೆ ನಕ್ಕು ಹೇಳಿದಳು
ಅಪ್ಪ ಈಗಿನ ಕಾಲವೇ ಬೇರೆ
ಈಗೆಲ್ಲ ಬಣ್ಣದ ಕೊಡೆಗಳ ಲೀಲೆ
ಸುತ್ತಮುತ್ತೆಲ್ಲ ಕಾಣುವ ಹಾಗೆ
[ನಾನೂ ಎಲ್ಲರಿಗೂ ಕಾಣಬೇಕು ಹಾಗೇ]

ನನಗೆ ನಾನು ಖರೀದಿಸಿದ ಕೊಡೆಗಿಂತ
ಅಪ್ಪ ಕೊಟ್ಟ ಕರಿಕಂಬಳಿ ಸುಖ
ಒಂಟಿಯಾಗಿ, ಗುಟ್ಟಾಗಿ ಹೊದ್ದು ಕೂರುತ್ತೇನೆ
ನಾನೇ ಆಗ ನನ್ನ ಮುಖ.

2 comments:

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ said...

ತುಂಬಾ ಚನ್ನಾಗಿದೆ ಸರ್ ,ನೆನಪು,ಬದಲಾದ ಕಾಲ,ಆತ್ಮ ತೃಪ್ತಿ ಎಲ್ಲವೂ ಒಂದೆ ಕವನದಲ್ಲಿ ಚನ್ನಾಗಿ ಮೂಡಿ ಬಂದಿದೆ.

ಮನಸ್ವಿ said...

ಮಳೆಗಾಲದಲ್ಲಿ ಓದಲು ಸುಂದರ ಕವನ, ಸಮಯೋಚಿತ ಬರಹ,
ಕಂಬಳಿ ಕೊಪ್ಪೆಯ ಜಾಗದಲ್ಲಿ ಪ್ಲಾಸ್ಟೀಕ್ ಕೊಪ್ಪೆಗಳು ಬಂದಿವೆ... ಕಂಬಳಿಯ ಪ್ಲಾಸ್ಟೀಕ್ ನುಂಗಿತ್ತಾ ಎಂದು ಗುಣಗಬಹುದು