ಮನಸ್ಸಿನಾಗಸದಲ್ಲಿ ಭಾವಗಳು ಮಿಂಚಾಗಿ ಮಾತು ಹೊಳೆಯುವುದು ರನ್ನದಂತೆ .
ಭಾನುವಿನ ಬೆಳಕಲ್ಲಿ ಉಕ್ಕುವನು ಚಂದಿರನು ಮಾತು ಅರಳುವುದು ಆಗ ಜೊನ್ನದಂತೆ !
ಕವನ ಬೆಳೆಯುವುದು ಭಾಷೆಯೊಡಲೊಳಗೆ ಅದಕನ್ನ ನನ್ನ ಭಾವದ ರಕ್ತಮಾಂಸ .
ಹೊಕ್ಕುಳಿನ ಬಳ್ಳಿ ಕತ್ತರಿಸದಿರೆ ಎಲ್ಲ ಜೀವಕ್ಕೂ ಸಾವು ಕವನಕ್ಕೂ ಬೇಕದರ ತಾವು !
ಕವನ ಮಾತಾಡುವುದಿನ್ನೆನ್ನ ದನಿಯಾಗಿ ನಾನು ಹೊಗುವೆನು ಮತ್ತೆ ಮೌನದೊಳಗೆ
ಪಟ್ಟ ಪಾಡುಗಳೆಲ್ಲ ಎಂದು ಹಾಡಾಗುವುವು? ಕಾಯುವೆನು ನಾನು ನನ್ನ ಜೊತೆಗೆ!
1 comment:
ಮುತ್ತಣ್ಣ ಬ್ಲಾಗ್ ಲೋಕಕ್ಕೆ ಸುಸ್ವಾಗತ, ಕಾವ್ಯ ತುಂಬಾ ಪ್ರಾಸಬದ್ದವಾಗಿದೆ... ಹೀಗೆ ಅತ್ಯುತ್ತಮ ಕಾವ್ಯ, ಕವನ, ಕಥೆ, ಬರಹಗಳು ನಿಮ್ಮಿಂದ ಮೂಡಿಬರಲಿ .
Post a Comment