Tuesday, September 28, 2010

ಅಕ್ಷೋಹಿಣಿ.

ಕಪಿಗಳ ಸೈನ್ಯದ ಎಣಿಕೆ ಮುಗಿದ ಅನಂತರ ನನಗೆ ಮಹಾಭಾರತದ ಕಾಲದ ಸೈನ್ಯದ ಎಣಿಕೆಯ ಬಗ್ಗೆ ಕುತೂಹಲ ಹುಟ್ಟಿತು. ದ್ವಾಪರ ಯುಗದಲ್ಲಿ ಸೈನ್ಯವನ್ನು  ಅಕ್ಷೋಹಿಣಿಯ ಲೆಕ್ಕದಲ್ಲಿ ಎಣಿಸುತ್ತಿದ್ದರು. ಕುರುಕ್ಷೇತ್ರದ ಯುದ್ಧದಲ್ಲಿ ಒಟ್ಟು ೧೮ ಅಕ್ಷೋಹಿಣಿ ಸೈನ್ಯ ಭಾಗವಹಿಸಿತ್ತಂತೆ.  ೨೧೮೭೦ ಆನೆಗಳು, ೨೧೮೭೦ ರಥಗಳು, ೬೫೬೧೦ ಕುದುರೆಗಳು ಮತ್ತು ೧೦೯೩೫೦ ಕಾಲಾಳುಗಳು ಸೇರಿದರೆ ಒಂದು ಅಕ್ಷೋಹಿಣಿ ಆಗುತ್ತದೆ. ಇಂತಹ ೧೮ ಅಕ್ಷೋಹಿಣಿ ಅಂದರೆ ೩೯೩೬೬೦ ಆನೆಗಳು, ಅಷ್ಟೇ ಸಂಖ್ಯೆಯ ರಥಗಳು,೧೧೮೦೯೮೦ ಕುದುರೆಗಳು ಮತ್ತು ೧೯೬೮೩೦೦ ಕಾಲಾಳುಗಳು ಆದಂತಾಯಿತು. ಇದ್ದರೂ ಇರಬಹುದು.ಕಪಿಗಳ ಸಂಖ್ಯೆಗೆ ಹೋಲಿಸಿದರೆ ಇದು ತೀರ ಹೆಚ್ಚಲ್ಲ.

5 comments:

ಅಪ್ಪ-ಅಮ್ಮ(Appa-Amma) said...

ಸರ್,
ನೀವು ಗಣತಿಯಲ್ಲಿ ಸಾಕಷ್ಟು ಪ್ರಾವೀಣ್ಯತೆ ಸಾಧಿಸಿದ್ದೀರಿ :)
ಕಪಿಸೇನೆ ಆಯ್ತು ಈಗ ಕುರುಕ್ಷೇತ್ರ ಎಣಿಕೆ..
ಧನ್ಯವಾದಗಳು

g.mruthyunjaya said...

ಲೆಕ್ಕ ಮಾಡಲಿಕ್ಕೆ ಹೋದರೆ ಇದರ ಕಥೆಯೂ ಅದೇ! ಉತ್ಪ್ರೇಕ್ಷೆಯೂ ಒಂದು ಅಲಂಕಾರ. ಅಷ್ಟೇ!

shree said...

ಓ., ಅದಕ್ಕೆ ಹನುಮಂತ ಮುಖ ತಿರ್ಸಿ ಕುಳಿತದ್ದು ಮಹಾಭಾರತದಲ್ಲಿ.

ಮೃತ್ಯುಂಜಯ ಹೊಸಮನೆ said...

ನಾನೂ ಒಪ್ಪುತ್ತೇನೆ.ಅದು ಉತ್ಪ್ರೇಕ್ಷೆಯೇ ಸರಿ. ಆದರೆ ನನಗೆ ವಿಸ್ಮಯ ಹುಟ್ಟಿಸಿದ್ದು ಅಷ್ಟು ಅಗಾಧ ಮೊತ್ತದ ಸಂಖ್ಯೆಗಳನ್ನು ಎಣಿಸಲು ಅವರು ರಚಿಸಿದ ಸೂತ್ರಗಳು.ಅದರ ಬಗ್ಗೆ ಗಮನ ಸೆಳೆಯುವುದು ಮಾತ್ರ ನನ್ನ ಉದ್ದೇಶವಾಗಿತ್ತು.

Adarsha said...

ಒಳ್ಳೆ ಬರಹ.. ಆಘಾದ ಮೊತ್ತಗಳ ಬಗ್ಗೆ ಯೋಚಿಸಿದರೆ Googolplex ನೆನಪಾಗುತ್ತದೆ. ಈ ಸಂಕೆಯನ್ನು ದಶಮಾನ ಸಂಕೆಗಳಲ್ಲಿ ಬರೆಯಹೊದರೆ ನಮ್ಮ ಜಗತ್ತು (ಬರಿ ಬೂಗ್ರಹ ಅಲ್ಲ) ಸಾಕಾಗುವುದಿಲ್ಲ!!