Thursday, September 11, 2008

ಮಾತು ಮುತ್ತು.


ಆನೆಗೆ ನಡೆದದ್ದೇ ದಾರಿ . ಇರುವೆಗೂ ಕೂಡ..

ಪಾಪ ಕಳೆವಾತುರದಿ ಭಕ್ತ ಜನ ಗುಡಿಯಲ್ಲಿ ! ಲಕ್ಷ್ಮಿ ಕುಣಿಯುತ್ತಾಳೆ ಅರ್ಚಕರ ಮನೆಯಲ್ಲಿ !

ರಾತ್ರಿ ಕಳೆಯಿತು. ಚಂದ್ರ ತೆರಳಿದ. ವಿರಹ ನಿಶೆಗೆ .
ಉಮ್ಮಳದ ಅವಳ ಕಂಬನಿ.
ಇಬ್ಬನಿ !

ಸೂರ್ಯ ಮುಳುಗಿದ.
ಸಿಟ್ಟಲ್ಲಿ ಸಂಧ್ಯೆ ಎಸೆದಳು ಮಲ್ಲಿಗೆಯ ಮಾಲೆ !
ನಭದ ತುಂಬೆಲ್ಲ ಮಿನುಗು ತಾರೆ !

ಕೊರಡೊಣಗಿದರೆ ಕಿಡಿಯೊಂದೇ ಸಾಕದರ
ದಹಿಸಲಿಕೆ !
ಹಸಿ ಕಾಷ್ಠ . ಅಗ್ನಿಯೂ ಭಗ್ನ. ಮಾಯವಾಗುವನು
ಧೂಮದೊಳಗೆ !

3 comments:

ಮನಸ್ವಿ said...

ಆನೆ ತಾನು ನೆಡೆದ ದಾರಿಯಲ್ಲಿ ಹೆಜ್ಜೆ ಗುರುತನ್ನು ಮೂಡಿಸಿ ಹೋದರೆ.. ಒಂಟಿ ಇರುವೆ ಸಾಗಿದ ದಾರಿ ಗೊತ್ತೇ ಆಗುವದಿಲ್ಲ, ಸಾಲಲ್ಲಿ ಚಲಿಸಿದರೆ ಮಾತ್ರ ಅವು ತಮ್ಮ ಛಾಪನ್ನು ಮೂಡಿಸಿಯೇ ಹೋಗುತ್ತವೆಯೇ? ಅವು ಒಗ್ಗಟ್ಟಿನಲ್ಲಿ ಬಲವಿದೆ ಎಂದು ಸಾರುತ್ತವೆ ಅನಿಸುತ್ತದೆ.. ಎರಡನೇ ಸಾಲು ಅದ್ಭುತ, ಲಕ್ಷ್ಮಿ ಅರ್ಚಕರ ಮನೆಯಲ್ಲಿ ಹಾಗು ಮುಜರಾಯಿಯವರು ಹೊತ್ತೊಯ್ದ ಲಕ್ಷ್ಮಿಯು ಮಸೀದಿಯಲ್ಲಿ ನರ್ತಿಸದೆ ವಿಧಿಯಿಲ್ಲ !
3,4,5ನೆ ಸಾಲುಗಳು ಕೂಡ ಸುಂದರವಾಗಿದೆ, ಹೌದು ಧೂಮ ಬತ್ತಿಯ ತುದಿಯಲ್ಲೂ ನಿಗಿ ನಿಗಿ ಸುಡುವ ಅಗ್ನಿ ಪ್ರಜ್ವಲಿಸುವುದು ಧೂಮದೊಳಗಿಂದ !!ತುಂಬಾ ಚನ್ನಾಗಿದೆ

g.mruthyunjaya said...

I liked the poems 1,3 and 4 for the splendid imagination! They do certainly provoke deeper thoughts.
Thanks for giving these really good poems.

Kalse said...

Sundara Vicharagalu, Couldn't stop reading all your blogs