Wednesday, September 8, 2010

ಸರಿ-ತಪ್ಪು,ಲಾಭ-ನಷ್ಟ

.
ಸರಿ -ತಪ್ಪು ಮತ್ತು ಲಾಭ- ನಷ್ಟ ಇವು ನಮ್ಮ ಯೋಚನೆ,ಕ್ರಿಯೆಗಳನ್ನು ಸದಾ ನಿಯಂತ್ರಿಸುವ,ಪ್ರಚೋದಿಸುವ ತತ್ವಗಳು. ಸರಿ ಮತ್ತು ತಪ್ಪು ನೀತಿಯ ವಲಯಕ್ಕೆ ಸಂಬಂಧಿಸಿದ್ದು. ಲಾಭ, ನಷ್ಟ  ವ್ಯಾವಹಾರಿಕ ವಲಯಕ್ಕೆ ಸಂಬಂಧಿಸಿದ್ದು.  ಲಾಭವೂ ಆಗಬೇಕು ಮತ್ತು ಅದು ಸರಿಯಾದ ಮಾರ್ಗವೂ ಆಗಿರಬೇಕು ಎಂದು ಅಪೇಕ್ಷೆಪಟ್ಟು ಅದನ್ನು ಪಾಲಿಸುವವರು ನೈತಿಕವಾಗಿ ಹಾಗೂ ವ್ಯಾವಹಾರಿಕವಾಗಿ ಉತ್ತಮರು.  ನಷ್ಟವಾದರೂ ಚಿಂತೆಯಿಲ್ಲ ಸರಿಯಾದದ್ದನ್ನು ಮಾಡುತ್ತೇನೆ ಎನ್ನುವವರು ನೈತಿಕವಾಗಿ ಉತ್ತಮರು,ವ್ಯಾವಹಾರಿಕವಾಗಿ ದಡ್ಡರು. ಇವರ ಜೊತೆ  ತುಂಬ ಭರವಸೆಯಿಂದ ವ್ಯವಹರಿಸಬಹುದು. ತಪ್ಪು ಎಂದು ಗೊತ್ತಿದ್ದೂ ಕೇವಲ ಲಾಭಕ್ಕಾಗಿ ಮಾಡುವುದು ನಯವಂಚನೆ.ಇವರು ನೈತಿಕವಾಗಿ ಅಧಮರು,ವ್ಯಾವಹಾರಿಕವಾಗಿ ಪರಮ ಸ್ವಾರ್ಥಿಗಳು ಮತ್ತು ಬುದ್ಧಿವಂತರು. ಇವರ ಜೊತೆ ತುಂಬಾ ಎಚ್ಚರಿಕೆಯಿಂದ ವ್ಯವಹರಿಸಬೇಕು. ಇವರು ಯಾವಾಗ ಹೇಗೆ ಎಂಬುದು ತಿಳಿಯುವುದಿಲ್ಲ. ಇನ್ನು ತಪ್ಪನ್ನೂ ಮಾಡುತ್ತಾ ನಷ್ಟ ಅನುಭವಿಸುವವರು ಮೂರ್ಖರು.ಒಂದೋ ಇವರಿಗೆ ತಿಳಿ ಹೇಳಬೇಕು ಅಥವಾ ಇವರಿಂದ ದೂರವಿರಬೇಕು.
*****
ಸಾಮಾನ್ಯವಾಗಿ, ಯಾವುದೇ ಸಂಗತಿಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಾಗ ಆ ಸಂಗತಿ ನಮಗೆ ಸಂಬಂಧಿಸಿದ್ದು ಅಲ್ಲವಾದರೆ ನಾವು ಸರಿ-ತಪ್ಪುಗಳ ತತ್ತ್ವವನ್ನು ಬಳಸುತ್ತೇವೆ. ನಮಗೆ ಸಂಬಂಧಿಸಿದ ಸಂಗತಿಯಾದರೆ ಸರಿ-ತಪ್ಪುಗಳ ಬದಲು ಲಾಭ-ನಷ್ಟದ ತತ್ವ ಬಳಸುತ್ತೇವೆ. ಉದಾಹರಣೆಗೆ ವಿದ್ಯುತ್ ನಿಗಮದ ನೌಕರರು ಮುಷ್ಕರ ಮಾಡಿದರೆ ಬ್ಯಾಂಕ್ ನೌಕರರು "ಇವರಿಗೆ ಎಷ್ಟು ಸವಲತ್ತು ಕೊಟ್ಟರೂ ಸಾಲಲ್ಲ!ಹೀಗಾದರೆ ದೇಶ ಉದ್ಧಾರವಾದಂತಯೇ!" ಎಂದು ಟೀಕಿಸುತ್ತಾರೆ. ಆದರೆ ಅದೇ ಉದ್ದೇಶಕ್ಕಾಗಿ ಅವರೂ ಮುಷ್ಕರ ಮಾಡುತ್ತಾರೆ. ಆವಾಗ ಮೇಲಿನಂತೆ ಟೀಕೆ ಮಾಡುವ ಸರದಿ ವಿದ್ಯುತ್ ನೌಕರರದು.ನಮ್ಮೆಲ್ಲ ತೀರ್ಮಾನಗಳು ವ್ಯಕ್ತಿನಿಷ್ಟತೆಯಲ್ಲಿ ತೀರ್ಮಾನವಾಗುತ್ತದೆಯೇ ಹೊರತು ವಸ್ತುನಿಷ್ಠತೆಯಲ್ಲಿ ಅಲ್ಲ. ನೈತಿಕ ನಷ್ಟಕ್ಕಿಂತ ಆರ್ಥಿಕ ಲಾಭವೇ ಹೆಚ್ಚು ಮುಖ್ಯವಾದದ್ದು ಅಥವಾ/ಹಾಗೂ ಈ ವ್ಯವಸ್ಥೆ ಹಾಳಾಗಿದೆ ಮತ್ತು ಹೀಗೆ ಹಾಳಾಗಲು ನನ್ನೊಬ್ಬನನ್ನು ಬಿಟ್ಟು ಉಳಿದೆಲ್ಲರು/ಉಳಿದೆಲ್ಲವೂ ಕಾರಣ ಎಂಬ ಒಳನಂಬಿಕೆಯೇ ಈ ಪ್ರವೃತ್ತಿಯ ಕಾರಣವಿರಬಹುದೇ?

8 comments:

ಸೀತಾರಾಮ. ಕೆ. / SITARAM.K said...

ತುಂಬಾ ಸತ್ಯವಾದ ಮಾತು. ಚಿಂತನೆಯ ಲೇಖನ. ಧನ್ಯವಾದಗಳು.

Ashok.V.Shetty, Kodlady said...

Nice Article.....

ಮನಮುಕ್ತಾ said...

ಒಳ್ಳೆಯ ಲೇಖನ...

ಮನಸ್ವಿ said...

ನಿಜ, ಯೋಚಿಸಬೇಕಾದ ವಿಚಾರ...

V.R.BHAT said...

ಎರಡೇ ಸಾಲಿನಲ್ಲಿ ಬಹಳ ಚಿಂತನೆಗೆ ಹಚ್ಚಿದ್ದೀರಿ, ಬಹಳ ಮಾರ್ಮಿಕ ವಿಚಾರಲಹರಿ, ನಿಮಗೆ ಹಬ್ಬದ ನನತರಬಂದು ಹಬ್ಬದ ಶುಭಾಶಯ ಕೋರುತ್ತಿದ್ದೇನೆ, ಮೊನ್ನೆ ನಿಮ್ಮ ಸಾಗರದಲ್ಲಿ ನಾನಿದ್ದೆ-ಒಂದು ಸ್ವಲ್ಪ ಹೊತ್ತು ಮಾತ್ರ, ನಿಮ್ಮ ನೇರ ಸಂಪರ್ಕ ಇರದ ಕಾರಣ ಭೇಟಿಯಾಗಲೀ ಸಂವಹನವಾಗಲೀ ಸಾಧ್ಯವಾಗಲಿಲ್ಲ, ಮತ್ತೊಮ್ಮೆ ಸಿಗೋಣ, ನಮಸ್ಕಾರ

ಜಲನಯನ said...

ಮೃತ್ಯುಂಜಯ್ ಸರ್, ನಿಜ ತಾನು ಮಾಡುವುದು ಕ್ರಿಯೇಟಿವ್ ಅದೇ ಬೇರೆಯವರು ಮಾಡಿದ್ರೆ ಹುಚ್ಚಾಟ ಎನ್ನುವ ಮಂದಿಯ ಕಾಲವಿದು...ಚನ್ನಾಗಿದೆ ಚಿಂತನೆ

raghupathi said...

ಸರಿ-ತಪ್ಪು, ಲಾಭ-ನಷ್ಟ ಚಿಂತನೆ ಚೆನ್ನಾಗಿದೆ

raghupathi said...

ಸರಿ-ತಪ್ಪು, ಲಾಭ-ನಷ್ಟ ಚಿಂತನೆ ಚೆನ್ನಾಗಿದೆ